ನೀನಿರಬೇಕಿತ್ತು ..

5

meditation-
ಹೊಸ ಬೆಳಗಿನಲ್ಲಿ …
ಅಂಗಳದ ತುಂಬಾ
ಹರಳು ಇಬ್ಬನಿಯ
ರಂಗವಲ್ಲಿ ಮೂಡಿತ್ತು …

ಎಳೆ ಬಿಸಿಲ ಉಂಗುರಗಳ
ಜೊತೆಯಾಗಿ ನೀನಿರಬೇಕಿತ್ತು ..

ಊರಂಚಿನ ಹಸಿರ ಮೇರೆಯೆಲ್ಲ
ಆಗಸದ ಕೆಂಪಿನಲ್ಲಿ ಕರಗಿ
ಕತ್ತಲ ಮಡಿಲಲ್ಲಿ ಮಲಗುತಿರಲು
ಬೀಸು ತಂಗಾಳಿಯಲ್ಲಿ
ಹಿತವಾದ ಮೌನವಿತ್ತು

ಮೌನಕ್ಕೆ ಜೊತೆಯಾಗಿ
ಸಖ ನೀನಿರಬೇಕಿತ್ತು

ಹೊಳೆಯಂಚಿನ ಹಾದಿಯಲ್ಲಿ
ಸುಮ್ಮನೆ ನಡೆವಾಗ ..
ಏಕಾಂಗಿ ಮನ ಜೊತೆಯಲ್ಲಿ
ನಿನ್ನ ಕಲ್ಪಿಸಲು
ಆಡುವ ಸಾವಿರ ಮಾತುಗಳಿತ್ತು ..

ನನ್ನೊಲವ ಮಾತುಗಳ
ಜೊತೆಯಾಗಿ ನೀನಿರಬೇಕಿತ್ತು ..

ಪಾದ ತೋಯಿಸಿದ ಅಲೆಗಳು
ಮರಳಿ ಬರುವುದರೊಳಗಾಗಿ …
ಹಸಿ ಮರಳ ಮೇಲೆ
ಹೆಜ್ಜೆಗುರುತು ಮೂಡಿತ್ತು ..

ಜೋಡಿ ಹೆಜ್ಜೆಗಳಿಗೆ
ಜೊತೆಯಾಗಿ ನೀನಿರಬೇಕಿತ್ತು..

 -ಸಂಧ್ಯಾ ಶ್ರೀಧರ ಭಟ್ಟ್

sandya-ಸಂಧ್ಯಾ ಶ್ರೀಧರ ಭಟ್ಟ್.

ಮಳೆ ಬಂದರೆ ಮನೆಯೊಳಗೆ ಕಾಲು ನಿಲ್ಲದ ಹುಡುಗಿ ನಾನು. ಮಲೆನಾಡಿನವಳು. ನನ್ನೂರು ಶಿರಸಿ ತಾಲೂಕು ಮಂಜುಗುಣಿಯ ಹೊಸಗದ್ದೆ. ಬಿ. ಕಾಮ್ ಪದವಿಧರೆ. ಬೆಂಗಳೂರಲ್ಲಿ ಉದ್ಯೋಗ. ಪುಸ್ತಕಗಳೆಂದರೆ ಪ್ರಾಣ. ಸಮಯ ಕಳೆಯಲು ಪೆನ್ನು, ಪೆನ್ಸಿಲ್, ಬಣ್ಣಗಳ ಜೊತೆ ಆಡಬಲ್ಲೆ. ಸುಮ್ಮನೆ ಬರುವ ಭಾವಗಳಿಗೆ ಅಕ್ಷರ ರೂಪ ಕೊಟ್ಟಿದ್ದು ಇಂದು ಪುಟ್ಟ ಬ್ಲಾಗ್ ಆಗಿ ಮಾರ್ಪಟ್ಟಿದೆ. ಫೋಟೋಗಳೆಂದರೆ ಪ್ರಾಣ.ಬರವಣಿಗೆಗೆ ಮೊದಲ ಸ್ಫೂರ್ತಿ ಫೋಟೋಗಳೇ. ತುಂಬು ಕುಟುಂಬದ ಮುದ್ದಿನ ಮಗಳು. ಬದುಕಲ್ಲಿ ಹೇಗಾದರೂ ಬದುಕಿದರಾಯಿತು ಎಂಬ ಉಡಾಫೆ ಮನೋಭಾವವಿಲ್ಲ . ಹೀಗೆಯೇ ಬದುಕಬೇಕು ಎಂಬ ಸಿದ್ದಾಂತ ಹೊಂದಿದವಳೂ ಅಲ್ಲ. ಆದರೆ ಬದುಕು ಹೇಗೆ ಬಂದರೂ ಎದುರಿಸ ಬಲ್ಲೆ ಎಂಬ ಧೈರ್ಯ ಮತ್ತು ಶಕ್ತಿ ಎರಡನ್ನೂ ಹಿರಿಯರೆಲ್ಲರೂ ನೀಡಿದ್ದಾರೆ . ಬದುಕಲ್ಲಿ ಪ್ರೀತಿಯಿಂದ ಕಲಿತದ್ದಕ್ಕಿಂತ ಹೆಚ್ಚ್ಹಾಗಿ ಬೈಸಿಕೊಂಡೆ ಕಲಿತದ್ದು . ಇವರ್ಯಾರೂ ಹೇಳಿಕೊಡದಂಥ, ಬೈದರೂ ಕಲಿತುಕೊಳ್ಳದಂಥಹ ಪಾಠಗಳನ್ನು ಬದುಕು ಬೈದು ಹೇಳಿಕೊಟ್ಟಿದೆ , ತಿದ್ದಿದೆ . ಒಂದೆರಡು ಅವ್ಯಕ್ತ ನೋವುಗಳಿವೆ ಎನ್ನುವುದನ್ನು ಬಿಟ್ಟರೆ ಬದುಕಿನಲ್ಲಿ ಪರಮ ಸುಖಿ ಮತ್ತು ಪರಮ ಸಂತೋಷಿ ನಾನು.

blog; http://sandhyeyangaladi.blogspot.in

 

“Mediation” is a photo-writing project where a black and white photo ( shot by me ) is used to express the feelings of the writer through words . These posts are written by different people. Two languages are used one is Kannada which is my mother tongue and the other is English. To know more about this project please check this link.

Blog Comments

Wow…what a photography…i don’t know more about poetry i am sorry…:( but i really love those pictures..superb…

thanks Vivek , appreciate your feedback!

Add a comment

*Please complete all fields correctly

SIMILAR STORIES

Posted by dinesh maneer | October 31, 2017
ಒಣ ರೋದನ
To waste, to destroy our natural resources, to skin and exhaust the land instead of using it so as to increase its usefulness, will result in undermining in the days...
Posted by dinesh maneer | February 14, 2017
ಮನದೊಳಗಣ ಮನೆಯ ಅಮೂರ್ತ ಬಿಂಬಗಳು
Published in the leading kannada newspaper " Prajavani" ಪ್ರಜಾವಾಣಿ ಯಲ್ಲಿ ಪ್ರಕಟಿತವಾದ ಲೇಖನ . ಮೂಲ ಲೇಖನ ಇಲ್ಲಿದೆ    ಈ ಅಮೂರ್ತ ಛಾಯಾಗ್ರಹಣ ( abstract photography ) ಸಂಕೀರ್ಣ ಅನುಭಗಳ ಅಭಿವ್ಯಕ್ತಿಗೆ ಒದಗಿಬಂದ ಅನುಭವ ಕಥನವನ್ನು ಕನ್ನಡದ...
Posted by dinesh maneer | December 16, 2016
ಸೃಜನಶೀಲ ಹಸಿವಿಗೆ ಮಸೂರದೊಳಗಿನ ಆಹಾರ
[ article published in Prajavani newspaper on 10th July 2016] ಈಕಲೆಯ ಸೆಳೆತವೇ ಹಾಗೆ! ಎಷ್ಟು ಚಿತ್ರ ತೆಗೆದರೂ ಸಮಾಧಾನವಾಗದ ಭಾವ. ಆಹ್! ಒಳ್ಳೆಯ ಚಿತ್ರ ಬಂದೇಬಂತೆಂಬ ಒಂದು ಕ್ಷಣದ ಸಂಭ್ರಮ ಮರುಕ್ಷಣದಲ್ಲಿ ಠುಸ್ ಎಂದು ಒಡೆದುಹೋದರೂ ಹೋದೀತು....