4

meditation-6507

ನಾಳೆಯಾ ಬೆಳಗನು ಶಿಖರದೀ ನೋಡುವಾ,

ತೋಳಿನಾ ಬಲದಲೇ ಶರಧಿಯಾ ಈಜುವಾ

 ಸವೆದಿಹ  ಹಾದಿಯ  ಋಣವದು ಕಳೆದಿದೆ,

ಅವಿತಿಹ ಎದೆಯೊಳ  ದನಿಯದು ಮೊಳಗಿದೆ,

ನವಯುಗ ನಾಂದಿಗೆ  ಚಣವದು  ಮೊಳೆತಿದೆ,

ಸವಿಸವಿ   ಕನಸಿನ  ಸರಪಣಿ   ಸೆಳೆದಿದೆ.

 

ಜವರಾಯನ ಕರಿ ಮೊಸಳೆಯು  ಮುಳುಗಿದೆ,

ಬವಣೆಯ  ತೆರೆಗಳ  ನೆರೆಯದು   ಇಳಿದಿದೆ,

ಸಾವಿನ  ಸುಳಿಗಳ  ಭಯವದು   ಅಳಿದಿದೆ,

ಭವಿತವ್ಯದ  ಗೆರೆ  ಕೈಯ್ಯಲೆ   ಹೊಳೆದಿದೆ.

 

ಕವಿದಿಹ ಕರಿಮೆದೆ ಹನಿಯದು ಜೊಳಗಿದೆ,

ಭುವನದ ಹಾದಿಗೆ ಲಾಟೀನು ಬೆಳಗಿದೆ.

ನಾವೆಯ ಮರೆತಿಹ ಪಯಣವು ಎಳೆದಿದೆ,

ಜವ್ವನದಾ ಹಸಿ ಹಂಪಲು ಗಳತಿದೆ .

 -ಚಿನ್ಮಯ ಭಟ್ಟ

(ಶಬ್ಧಾರ್ಥ : ಜವರಾಯ-ಯಮ ,ಭವಿತವ್ಯ-ಭವಿಷ್ಯ,ಮೆದೆ-ಗುಂಪು(ಸಾಮಾನ್ಯವಾಗಿ ಹುಲ್ಲಿನ ಕಟ್ಟನ್ನು ಮೆದೆ ಎಂದು ಬಳಸುತ್ತಾರೆ),ಭುವನ-ಭೂಮಿ,ಜಲ ,ಜವ್ವನ-ಯವ್ವನ )

 

2013-04-08 09.54.40ನಮಸ್ತೆ … ನನ್ನ ಊರು ಶಿರಸಿಯ ತದ್ದಲಸೆಯ ಹತ್ತಿರದ ಅಗಲಬಾವಿ.. ನಾನು ಸಧ್ಯಕ್ಕೆ
ಚಿಕ್ಕಮಗಳೂರಿನಲ್ಲಿ ಕೊನೆಯ ವರ್ಷದ  ಇಂಜಿನಿಯರಿಂಗ್ ವಿದ್ಯಾರ್ಥಿ ..ಬಾಲ್ಯದಿಂದಲೂ
ಪೆನ್ನು,ಪೇಪರಿನ ಹುಚ್ಚಿದೆ..ಓದುವಿಕೆ ನನ್ನ ಅಚ್ಚುಮೆಚ್ಚಿನ ಹವ್ಯಾಸ..
ಮೊದಲು ನನ್ನಲ್ಲೇ ಬರೆದಿಟ್ಟುಕೊಳ್ಳುತ್ತಿದ್ದ ಬರಹಗಳನ್ನು,ಎಲ್ಲರೆದುರು ತೆರೆದಿಡಲು
ಸಹಾಯಕವಾಗಿದ್ದು ಬ್ಲಾಗ್ ಜಗತ್ತು…ಅಲ್ಲಿಂದಲೇ ಸಾಕಷ್ಟು
ಕಲಿತಿದ್ದೇನೆ,ಕಲಿಯುತಿದ್ದೇನೆ..ಒಂದೆರಡು ಬಾರಿ ವಿಜಯವಾಣಿ, ಸಂಯುಕ್ತ ಕರ್ನಾಟಕದಲ್ಲೂ
ಬರಹಗಳು ಇಣುಕಿವೆ.. ಇನ್ನು  ಕವನಗಳ ಬಗ್ಗೆ ತುಸು ಪ್ರೀತಿ..ಹೊಸ ಹೊಸ ಶಬ್ಧ,ಹೊಸ
ಹೊಸಕಲ್ಪನೆಗಳನ್ನು ಅವುಗಳಲ್ಲಿ ಹುಡುಕುವ ಮನಸ್ಸು ನನ್ನದು…ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ  ನಿರೂಪಣೆ,ಚಿಕ್ಕ-ಪುಟ್ಟ ಕಾಮೆಂಟರಿ ಮಾಡವದೂ ಇದೆ ..

http://chinmaysbhat.blogspot.in/

 

“Mediation” is a photo-writing project where a black and white photo ( shot by me ) is used to express the feelings of the writer through words . These posts are written by different people. Two languages are used one is Kannada which is my mother tongue and the other is English. To know more about this project please check this link.


Dinesh Maneer

Photographer. Writer .Trekker.Traveler.Businessman based out of Karnataka, India

All author posts

Privacy Preference Center