5

meditation-
ಹೊಸ ಬೆಳಗಿನಲ್ಲಿ …
ಅಂಗಳದ ತುಂಬಾ
ಹರಳು ಇಬ್ಬನಿಯ
ರಂಗವಲ್ಲಿ ಮೂಡಿತ್ತು …

ಎಳೆ ಬಿಸಿಲ ಉಂಗುರಗಳ
ಜೊತೆಯಾಗಿ ನೀನಿರಬೇಕಿತ್ತು ..

ಊರಂಚಿನ ಹಸಿರ ಮೇರೆಯೆಲ್ಲ
ಆಗಸದ ಕೆಂಪಿನಲ್ಲಿ ಕರಗಿ
ಕತ್ತಲ ಮಡಿಲಲ್ಲಿ ಮಲಗುತಿರಲು
ಬೀಸು ತಂಗಾಳಿಯಲ್ಲಿ
ಹಿತವಾದ ಮೌನವಿತ್ತು

ಮೌನಕ್ಕೆ ಜೊತೆಯಾಗಿ
ಸಖ ನೀನಿರಬೇಕಿತ್ತು

ಹೊಳೆಯಂಚಿನ ಹಾದಿಯಲ್ಲಿ
ಸುಮ್ಮನೆ ನಡೆವಾಗ ..
ಏಕಾಂಗಿ ಮನ ಜೊತೆಯಲ್ಲಿ
ನಿನ್ನ ಕಲ್ಪಿಸಲು
ಆಡುವ ಸಾವಿರ ಮಾತುಗಳಿತ್ತು ..

ನನ್ನೊಲವ ಮಾತುಗಳ
ಜೊತೆಯಾಗಿ ನೀನಿರಬೇಕಿತ್ತು ..

ಪಾದ ತೋಯಿಸಿದ ಅಲೆಗಳು
ಮರಳಿ ಬರುವುದರೊಳಗಾಗಿ …
ಹಸಿ ಮರಳ ಮೇಲೆ
ಹೆಜ್ಜೆಗುರುತು ಮೂಡಿತ್ತು ..

ಜೋಡಿ ಹೆಜ್ಜೆಗಳಿಗೆ
ಜೊತೆಯಾಗಿ ನೀನಿರಬೇಕಿತ್ತು..

 -ಸಂಧ್ಯಾ ಶ್ರೀಧರ ಭಟ್ಟ್

sandya-ಸಂಧ್ಯಾ ಶ್ರೀಧರ ಭಟ್ಟ್.

ಮಳೆ ಬಂದರೆ ಮನೆಯೊಳಗೆ ಕಾಲು ನಿಲ್ಲದ ಹುಡುಗಿ ನಾನು. ಮಲೆನಾಡಿನವಳು. ನನ್ನೂರು ಶಿರಸಿ ತಾಲೂಕು ಮಂಜುಗುಣಿಯ ಹೊಸಗದ್ದೆ. ಬಿ. ಕಾಮ್ ಪದವಿಧರೆ. ಬೆಂಗಳೂರಲ್ಲಿ ಉದ್ಯೋಗ. ಪುಸ್ತಕಗಳೆಂದರೆ ಪ್ರಾಣ. ಸಮಯ ಕಳೆಯಲು ಪೆನ್ನು, ಪೆನ್ಸಿಲ್, ಬಣ್ಣಗಳ ಜೊತೆ ಆಡಬಲ್ಲೆ. ಸುಮ್ಮನೆ ಬರುವ ಭಾವಗಳಿಗೆ ಅಕ್ಷರ ರೂಪ ಕೊಟ್ಟಿದ್ದು ಇಂದು ಪುಟ್ಟ ಬ್ಲಾಗ್ ಆಗಿ ಮಾರ್ಪಟ್ಟಿದೆ. ಫೋಟೋಗಳೆಂದರೆ ಪ್ರಾಣ.ಬರವಣಿಗೆಗೆ ಮೊದಲ ಸ್ಫೂರ್ತಿ ಫೋಟೋಗಳೇ. ತುಂಬು ಕುಟುಂಬದ ಮುದ್ದಿನ ಮಗಳು. ಬದುಕಲ್ಲಿ ಹೇಗಾದರೂ ಬದುಕಿದರಾಯಿತು ಎಂಬ ಉಡಾಫೆ ಮನೋಭಾವವಿಲ್ಲ . ಹೀಗೆಯೇ ಬದುಕಬೇಕು ಎಂಬ ಸಿದ್ದಾಂತ ಹೊಂದಿದವಳೂ ಅಲ್ಲ. ಆದರೆ ಬದುಕು ಹೇಗೆ ಬಂದರೂ ಎದುರಿಸ ಬಲ್ಲೆ ಎಂಬ ಧೈರ್ಯ ಮತ್ತು ಶಕ್ತಿ ಎರಡನ್ನೂ ಹಿರಿಯರೆಲ್ಲರೂ ನೀಡಿದ್ದಾರೆ . ಬದುಕಲ್ಲಿ ಪ್ರೀತಿಯಿಂದ ಕಲಿತದ್ದಕ್ಕಿಂತ ಹೆಚ್ಚ್ಹಾಗಿ ಬೈಸಿಕೊಂಡೆ ಕಲಿತದ್ದು . ಇವರ್ಯಾರೂ ಹೇಳಿಕೊಡದಂಥ, ಬೈದರೂ ಕಲಿತುಕೊಳ್ಳದಂಥಹ ಪಾಠಗಳನ್ನು ಬದುಕು ಬೈದು ಹೇಳಿಕೊಟ್ಟಿದೆ , ತಿದ್ದಿದೆ . ಒಂದೆರಡು ಅವ್ಯಕ್ತ ನೋವುಗಳಿವೆ ಎನ್ನುವುದನ್ನು ಬಿಟ್ಟರೆ ಬದುಕಿನಲ್ಲಿ ಪರಮ ಸುಖಿ ಮತ್ತು ಪರಮ ಸಂತೋಷಿ ನಾನು.

blog; http://sandhyeyangaladi.blogspot.in

 

“Mediation” is a photo-writing project where a black and white photo ( shot by me ) is used to express the feelings of the writer through words . These posts are written by different people. Two languages are used one is Kannada which is my mother tongue and the other is English. To know more about this project please check this link.


Dinesh Maneer

Photographer. Writer .Trekker.Traveler.Businessman based out of Karnataka, India

All author posts

Privacy Preference Center