dandelitrip-0818

Though it is called as industrial town of Uttara Kannada district the dense jungles surrounding the town make Dandeli second largest wildlife sanctuary of Karnataka.Dandeli is not new town to me , I used to visit my uncle,s family here  during  school  summer holidays. Me and my cousin had some unforgettable memories while wandering around these jungles and banks of Kali river. We used to hear  all those  wild animal stories which were part of daily lives of Dandelians and get thrilled!  Not to forget ,   those mouth watering  Kachoris , Girmits and lunch at Khanavalis  that we used to have,  makes me hungry whenever I think of them now. 

 I had no prior plans in mind when I was packing for this trip last month. I wanted to get a fresh introduction of Dandeli keeping that nostalgic memories alive. I wanted to see the landscapes around the town.  I also wanted to see few forest tribes who are living around Dandeli , making a living out of the forest.  I also wanted to see some rains!

 Other than rains I got my all wishes fulfilled. I visited a Gauliga tribe ( Gaulivada)  who make living out of selling milk. I saw crocodiles in river Kali , explored Supa backwaters ,  I came one inch  close to green vine snake and I tasted samosa, kachori and had  couple of heavy Jowar roti lunch at Eerappa Khanavali.

 Here are few nature  photos that I managed to capture with small introduction . Next visit I would bring some memories from the town.

  dandelitrip-1104

ಉತ್ತರ ಕನ್ನಡದ ಕೈಗಾರಿಕಾ ಪಟ್ಟಣ ಎಂದು ಕರೆಸಿಕೊಂಡರೂ ದಾಂಡೇಲಿ ಎರಡನೇ ದೊಡ್ಡ ಅಭಯಾರಣ್ಯವೆಂದೇ ಪ್ರಸಿದ್ಧಿ. ಇದಕ್ಕೆ ಕಾರಣ ದಾಂಡೇಲಿ ಪಟ್ಟಣವನ್ನು  ಸುತ್ತುವರೆದಿರುವ ದಟ್ಟ  ದಂಡಕಾರಣ್ಯ .ನನಗೆ ದಾಂಡೇಲಿ ಹಳೆಯ ನೆನಪುಗಳ ಬುತ್ತಿ .ಶಾಲೆಯ ಬೇಸಿಗೆ ರಜೆಗಳಲ್ಲಿ ಎಷ್ಟೋ ಸಲ ನನ್ನ ಮಾವನ ಮನೆಗೆ ಹೋಗಿದ್ದೇನೆ. ನನ್ನ ಮಾವನ ಮಗನ ಜೊತೆಗೆ ಅದೆಷ್ಟೋ ಮರೆಯಲಾಗದ ಅನುಭವಗಳನ್ನು ಇಲ್ಲಿ ಕಲೆ ಹಾಕಿದ್ದೇನೆ. ಆಗ ಕೇಳುತ್ತಿದ್ದ ದಾಂಡೇಲಿಯ ಕಾಡುಪ್ರಾಣಿಗಳ ಕಥೆ , ಅದರಲ್ಲೂ ಕಾಳಿ ನದಿಯ ಮೊಸಳೆಗಳ ಕಥೆ ಮೈ ನವಿರೇಳಿಸಿವೆ. ಆ ದಿನಗಳ ಮಳೆಯಲ್ಲಿ ತಿನ್ನುವ ಬಿಸಿ ಬಿಸಿ ಕಚೋರಿಯನ್ನು ನೆನಪಿಸಿಕೊಂಡರೆ ಈಗಲೂ ಬಾಯಿ ನೀರೂರುತ್ತದೆ, ಖಾನಾವಳಿಗಳ ಜೋಳದ ರೊಟ್ಟಿ ಊಟ ಈಗಲೂ ನನ್ನನ್ನು ಹಸಿವಿಸುತ್ತದೆ.

 ಜುಲೈ ತಿಂಗಳಿನ ನನ್ನ ದಾಂಡೇಲಿ ಪ್ರವಾಸಕ್ಕೆ ಪೂರ್ವ ಯೋಜನೆಯಿಲ್ಲದಿದ್ದರೂ , ಈ ಪಟ್ಟಣವನ್ನು ಹೊಸ ರೀತಿಯಲ್ಲಿ ನೋಡಬೇಕೆಂಬ ಭಾವ ಆವರಿಸಿತ್ತು . ಜೊತೆಯಲ್ಲಿ ಮತ್ತೆ ಅದೇ ಕಾಡುಗಳನ್ನು ಸುತ್ತಬೇಕು , ಕಾಳೀ ನದಿಯ ದಡಗಳಲ್ಲಿ ಓಡಾಡಬೇಕು , ಕಚೋರಿಯನ್ನು ಸವಿಯಬೇಕು ಎಂದೆಲ್ಲ ಅನ್ನಿಸಿತ್ತು . ಹದಿನೈದು ವರ್ಷಗಳ ಬಳಿಕ ಹೆಚ್ಚುಕಡಿಮೆ ಮರೆತೇ ಹೋದ ಜಾಗವನ್ನು ಮತ್ತೆ ನೋಡಬೇಕೆಂದರೆ ಹೇಗೆ ಅನಿಸಬಹುದು !

 ಒಟ್ಟಿನಲ್ಲಿ ಪ್ರವಾಸ ಚೆನ್ನಾಗಿತ್ತು. ಮಳೆ ಬೀಳದಿದ್ದರು ಒಂದೂವರೆ ದಿನದಲ್ಲಿ ನೋಡಬೇಕೆಂದುಕೊಂಡದ್ದರಲ್ಲಿ ಸುಮಾರು ನೋಡಿದೆವು .ಒಂದು ಚಿಕ್ಕ ಫೋಟೋ ಸೀರೀಸ್ ಈ ಪ್ರವಾಸದ ಬಗ್ಗೆ ಈ ಕೆಳಗೆ ನೋಡಿರಿ . ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ !