ಪ್ರಜ್ವಲ್, ಲೋಕೇಶ್ , ಸುಬ್ರಮಣ್ಯ ಮತ್ತು ರೋಹಿತ್ ನೀರಿನಲ್ಲಿ ಕುಣಿಯುತ್ತ ಏಳುತ್ತಾ  ನಿರರ್ಗಳವಾಗಿ ಇಂಗ್ಲಿಷ್ ನ ಸೂಪರ್ ಹಿಟ್ ಹಾಡಾದ despacito  ಹಾಡುವುದನ್ನು ಕೇಳಿದಾಗ ತುಂಬಾ ಆಶ್ಚರ್ಯವೇ ಆಯಿತು. ಕೆಂದಗಾಲಜಡ್ಡಿ ಯ ಸುಂದರ ಪರಿಸರದ ನಡುವೆ ಹರಿಯುತ್ತಿದ್ದ ಮಳೆಯಿಂದಾದ ನೀರಿನ ಸಣ್ಣ ಹಳ್ಳವೊಂದರಲ್ಲಿ ರಿಕ್ಷಾ ತೊಳೆಯಲೆಂದು ಬಂದಿದ್ದ ಅಣ್ಣಂದಿರ ಜೊತೆಗೆ ಟೈಮ್ ಪಾಸ್ ಮಾಡಲು ಬಂದ ಹುಡುಗರಿವರು. ಸ್ವಲ್ಪ ಹೊತ್ತು ನೀರಾಟ , ಈಜಾಟ ಆಡಿ , ಅಲ್ಲಿ ಓಡಾಡಿಕೊಂಡಿದ್ದ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬಾಟಲಿಗಳಲ್ಲಿ ಹಾಕಿ ಮನೆಗೆ ಕೊದೊಯ್ಯುವ ಪ್ಲಾನ್ ಅವರದ್ದು. ನೋಡಲು ಅಂತಹದ್ದೇನು ಸ್ವಚ್ಛ ಕಾಣದ ನೀರೇನಲ್ಲ ಅದು. ಆದರೆ ಹರಿಯುವ ನೀರು. ಸ್ವಲ್ಪ ಅಲ್ಲಾಡಿಸಿದರೆ ಮಣ್ಣಿನ ರಾಡಿ ಏಳುವಂತಹ ನೀರು. ಯಾವತ್ತೋ ಬೆಂಗಳೂರಿನ ಅತಿ ‘ಸ್ವಚ್ಛ’  ಮತ್ತು ‘ಶಿಷ್ಟಾಚಾರ’ದ ಜೀವನಕ್ಕೆ ರೂಢಿ ಆದ ನನಗೆ ಇದು ಸ್ವಲ್ಪ ಅಹಿತಕರ ಅನ್ನಿಸಿತಾದರೂ ನನ್ನ ಬಾಲ್ಯದಲ್ಲಿ ಮನೆ ಹಿಂದಿನ ಸಣ್ಣ ಕೆರೆಯಲ್ಲಿ ಹೀಗೆಯೇ ಆಡಿದ ನೆನಪೊಂದು ಸುಳಿದು ಸಮಾಧಾನ ಆಯಿತು. ಆದರೂ ಹತ್ತಿರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸಗಳನ್ನು , ಬಾಟಲಿಗಳನ್ನು ನೋಡಿದಾಗ ನನ್ನ ಮೂರು ವರ್ಷದ ಮಗಳು ಪರಿಧಿಯನ್ನು ಹೀಗೆ ಆಡಲು ಬಿಡಲು ಸಾಧ್ಯವೇ ಇಲ್ಲ ಅನ್ನಿಸಿತು.

[hcode_blockquote blockquote_icon=”1″]ಕರಾವಳಿ ಮಳೆ ಮತ್ತು ಮಕ್ಕಳು ಒಂದು ಸುಮಧುರ  ಸನ್ನಿವೇಶ[/hcode_blockquote]

ಸುಮಾರು ಒಂದು ಗಂಟೆ ನಡೆದು , ಯಾವುದಾದರು ಹೊಸ ನೀರಿನ  ಝರಿ ಸಿಗುತ್ತೇನೋ ಅಂದುಕೊಂಡಿದ್ದ ನನಗೆ ಸ್ವಲ್ಪ ನಿರಾಶೆ ಆಗಿತ್ತು . ಅಷ್ಟೊಂದು ಫೋಟೋಜೆನಿಕ್ ಆಗಿರುವ ಜಾಗ ಸಿಗಲಿಲ್ಲ .  ಹತ್ತು ವರ್ಷದಿಂದ ಛಾಯಾಚಿತ್ರಗ್ರಹಣ ಮಾಡುತ್ತಿರುವ ನನಗೆ ಇದು ಹೊಸತೇನಲ್ಲ . ತುಂಬಾ ಸಲ ಫೋಟೋ ಸಿಗದೇ ಅಥವಾ ಕ್ಯಾಮೆರಾ ಹೊರಗೆ ಸಹ ತೆಗೆಯದೆ ಹಿಂದಿರುಗಿದ್ದೇನೆ. ಒಮ್ಮೆ ಹಿಮಾಲಯದಲ್ಲಿ ಕ್ಯಾಂಪ್ ಮಾಡಿದಾಗಂತೂ ಪ್ರತಿಕೂಲ ವಾತಾವರಣದ ಕಾರಣ ಎರಡು ದಿನ ಕ್ಯಾಮೆರಾ ಹೊರಗೆ ತೆಗೆಯಲೇ ಇಲ್ಲ ! ಆದರೆ ಕ್ಯಾಮೆರಾ ಹೊರಗೆ ತೆಗೆಯದ ಕ್ಷಣಗಳು ಮನದಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಏಕೆಂದರೆ ನಮ್ಮ focus ಸುತ್ತಮುತ್ತಲಿನ ಆಗುಹೋಗುಗಳ  ಮೇಲೆ ಇರುತ್ತದೆಯೇ ಹೊರತು ಹೇಗೆ ಫೋಟೋ ತೆಗೆಯಬೇಕು ಅನ್ನುವ ತುಮುಲ ಇರುವುದಿಲ್ಲ.

ಕ್ಯಾಮೆರಾ ಹೊರಗೆ ತೆಗೆಯದ ಕ್ಷಣಗಳು ಮನದಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಏಕೆಂದರೆ ನಮ್ಮ focus ಸುತ್ತಮುತ್ತಲಿನ ಆಗುಹೋಗುಗಳ  ಮೇಲೆ ಇರುತ್ತದೆಯೇ ಹೊರತು ಹೇಗೆ ಫೋಟೋ ತೆಗೆಯಬೇಕು ಅನ್ನುವ ತುಮುಲ ಇರುವುದಿಲ್ಲ.

ಇಂದಿನ ಫೋಟೋಗ್ರಫಿ ಮುಗಿಯಿತೇನೋ ಅನ್ನುವಾಗಲೇ ನಾನು ಈ ಮಕ್ಕಳನ್ನು ಕಂಡಿದ್ದು ! ಇಷ್ಟೊತ್ತಿನವರೆಗೆ ಕ್ಯಾಮೆರಾ ಮುಟ್ಟದೆ ಇದ್ದ ನನಗೆ ತಡೆದುಕೊಳ್ಳಲು ಸಾಧ್ಯವೇ ಇರಲಿಲ್ಲ . ಮಕ್ಕಳ ಆ ಮುಗ್ಧ ಉಲ್ಲಾಸ , ಸಂಭ್ರಮ ಬಹುಷಃ ಮತ್ತೆ ನಮ್ಮ ಅನುಭವಕ್ಕೆ ಸಿಗದೇನೋ ಎಂದೆನಿಸಿಬಿಡುತ್ತದೆ. ಕರಾವಳಿ ಮಳೆ ಮತ್ತು ಮಕ್ಕಳು ಒಂದು ಸುಮಧುರ  ಸನ್ನಿವೇಶ. ಇವೆರಡು ಒಟ್ಟಿಗೆ ಸಿಕ್ಕಾಗ ನಾನು ಫೋಟೋ ತೆಗೆಯದೆ ಇರಲು ಸಾಧ್ಯವೇ ಇಲ್ಲ!

‘ ಬೆರಗು’  , ‘ಅತ್ಯಾಶ್ಚರ್ಯ’ , ‘ ಬಣ್ಣ ವೈಭವೀಕರಣ’ , ‘ಸೃಜನಶೀಲ ‘  ಇವೆ ಮೊದಲಾದ ಅಂಶಗಳನ್ನು ಒಳಗೊಂಡ ಛಾಯಾಚಿತ್ರ ಸಾಗರಗಳ ನಡುವೆ ಮುಗ್ಧ , ಸರಳ , ಸೊಗಸಾದ , ಭಾವನೆಗಳನ್ನು ಏಳಿಸುವ ,  ಕಥೆ ಹೇಳುವ ಚಿತ್ರ ಅಥವಾ  ಚಿತ್ರ ಸರಣಿಗಳು ಪ್ರಸ್ತುತದಲ್ಲಿ ಕಳೆದು ಹೋಗುತ್ತಿರುವುದು  ಛಾಯಾಚಿತ್ರಗ್ರಹಣ ಎಂಬ ಕಲೆಯ  ದುರದೃಷ್ಟ. ಒಂದು ಅತಿ ಸರಳ ಸನ್ನಿವೇಶವನ್ನು ಹೇಗೆ ಸುಂದರ ಚಿತ್ರಗಳ ಮೂಲಕ ನಿರೂಪಿಸುವುದು ಎನ್ನುವದಕ್ಕೆ  ಮೇಲಿನ ಚಿತ್ರ ಸರಣಿ ಒಂದು ಸಣ್ಣ ಉದಾಹರಣೆ ಹಾಗು ನನ್ನ ಒಂದು ಪ್ರಯತ್ನ